ಜಾರ್ಜಿಯ ಜಲಸಂಧಿ -
ಕೆನಡದ ಬ್ರಿಟಿಷ್ ಕೊಲಂಬಿಯ ಮತ್ತು ವ್ಯಾಂಕೂವರ್ ದ್ವೀಪದ ಮಧ್ಯೆ ಇರುವ ಜಲಸಂಧಿ. ಉದ್ದ ಸುಮಾರು 140 ಮೈ. ಗರಿಷ್ಠ ಅಗಲ 20 ಮೈ. ಉತ್ತರದಲ್ಲಿ ಕ್ವೀನ್ ಷಾರ್ಲಟ್, ದಕ್ಷಿಣದಲ್ಲಿ ವಾನ್ ಡ ಫ್ಯೂಕ ಜಲಸಂಧಿಗಳ ಮೂಲಕ ಪೆಸಿಫಿಕ್ ಸಾಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಜಲಸಂಧಿಯ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಣ್ಣಸಣ್ಣ ದ್ವೀಪಗಳಿರುವುದರಿಂದ ನೌಕಾಯಾನಕ್ಕೆ ಅನುಕೂಲವಿಲ್ಲ. ಮಧ್ಯದಲ್ಲೂ ಅಲ್ಲಲ್ಲಿ ಮುಳುಗಡೆಯಾದ ದ್ವೀಪಗಳಿವೆ. ಜಲಸಂಧಿಯ ಮಧ್ಯಭಾಗದ ಸರಾಸರಿ ಆಳ 900`-1,200`. ಅಲ್ಲಲ್ಲಿ ಇನ್ನೂ ತಗ್ಗುಪ್ರದೇಶಗಳೂ ಇವೆ.					(ಆರ್.ಎಸ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ